Saturday, January 30, 2010

ಗೆದ್ದೂ ಸೋತವ


ಅಂದು ಹೊಡೆದಾಡಿ ಗೆದ್ದೆ
ಇಂದು ಹೆಣವಾಗಿ ಬಿದ್ದೆ
ಕಾರಣ ಇಷ್ಟೇ..
ಅಂದು ನನಗಾಗಿ ಗೆದ್ದೆ
ಇಂದು ನಿನಗಾಗಿ ಬಿದ್ದೆ..

ಕೊಲೆಗಾತಿ


ಸರಿಯಿದ್ದೆ ನಾನು ಅಂದು
ನಿನ್ನ ನೋಡುವ ಮುಂದು
ಈಗ ಏನಾಯ್ತೋ ಇಂದು
ಬದುಕಲಾರೆ ಎಂದೂ ..

Monday, January 25, 2010

ಕಹಿ ನೆನಪು


ಕಣ್ಣಲ್ಲಿ ಕನಸು ಕೂತು, ಮನವೆಲ್ಲಾ ಬರಿದು ಆಯ್ತು.
ಬದುಕಿನುದ್ದಕ್ಕೂ ಹೃದಯ ಬಯಸಿತು,
ಸಿಗದೇ ಇಂದು ಅದು ಸತ್ತು ಹೆಣವಾಯ್ತು.

ನಾನೊಬ್ಬ ಮೂರ್ಖ



ಏನಪ್ಪಾ ಏನಾಯ್ತು ಈ ಹುಡ್ಗಂಗೆ ಅಂತೀರಾ??!! ನಿನ್ನೆ ಮೊನ್ನೆ ಸರಿ ಇದ್ದ ಈತ ಈಗ ಹೇಗಪ್ಪ ಮೂರ್ಖ ಆಗ್ತಾನೆ ಅಂದ್ರೆ.....
ಮನುಷ್ಯಂಗೆ ಅಗತ್ಯಗಳೇ ಮೂರ್ಖತನಕ್ಕೆ ದಾರಿ ಅಂತಾರೆ . ಹುಡುಗರು ಹುಡ್ಗೀರ್ನ ಮೂರ್ಖರು ಅಂತಾರೆ. ತಾವೇ ಅವರನ್ನ ಮೀರಿಸ್ತಾರೆ. ನಿಜ ಅಂದ್ರೆ ಎಲ್ಲ ಪುರುಷರ ಮೂರ್ಖ ತನದ ಹಿಂದೆ ಒಬ್ಳು ಮಹಿಳೆ ಇರ್ತಾಳೆ. ಹೇಗಪ್ಪ ಅಂದ್ರೆ ನನ್ನ ನೋಡಿ ಅನ್ಲಾ?